ಮಂಕಾಳ ಎಸ್‌. ವೈದ್ಯ ಜನಸೇವೆಗೆ ಜೀವ ಸಮರ್ಪಿಸಿರುವ ಅಪರೂಪದ ನಾಯಕ

Mankal S. Vaidya is an Indian politician from Karnataka. He is currently serving as Cabinet Minister in Government of Karnataka and as a member of Karnataka Legislative Assembly representing Bhatka

ಜನಸೇವೆಗೆ ಜೀವ ಸಮರ್ಪಿಸಿರುವ ಅಪರೂಪದ ನಾಯಕ

ಮಂಕಾಳ ಎಸ್‌ ವೈದ್ಯ, ರಾಜಕೀಯ ಕ್ಷೇತ್ರದಲ್ಲಿ ವಿರಳವಾಗಿ ಕಾಣ ಸಿಗುವ ವಿಭಿನ್ನ ನಾಯಕ. ತಮ್ಮ ಇಡೀ ಜೀವನವನ್ನು ಜನಸೇವೆಗೆ ಮುಡಿಪಾಗಿಟ್ಟು, ನಂಬಿ ಬಂದವರ ಕೈಬಿಡದೆ, ನೊಂದವರಿಗೆ ಸಹಾಯ ಹಸ್ತ ಚಾಚಿ ಅವರ ಬಾಳು ಬೆಳಗುತ್ತಿರುವ ಅಪರೂಪದ  ಜನಸೇವಕ.  ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾಗಿ ಹಾಗೂ ಉತ್ತರ ಕನ್ನಡದ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇಡೀ ರಾಜ್ಯದ ಜನರೇ ಮೆಚ್ಚುವಂಥ ಕೆಲಸ ಮಾಡುತ್ತಿರುವ ಅಭಿವೃದ್ಧಿಯ ಹರಿಕಾರ. ಇವರು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲೇ ಅಭಿವೃದ್ಧಿಯ ಪರ್ವವೇ ಪ್ರಾರಂಭವಾಗಿದೆ. ಅಮಿತ ಉತ್ಸಾಹ, ಹುರುಪಿನೊಂದಿಗೆ ನಾಡಿನ ಜನರ ಏಳಿಗೆಗೆ ಶ್ರಮಿಸುತ್ತಿರುವ ಮಂಕಾಳ ವೈದ್ಯ ಅವರು ಸಚಿವರಾಗಿ ಎರಡು ವರ್ಷದಲ್ಲಿ ಅದ್ಭುತ ಸಾಧನೆ ಮೆರೆದಿದ್ದಾರೆ. ಮೀನುಗಾರ ಸಮುದಾಯದ ನೋವಿಗೆ ಸ್ಪಂದಿಸಿ, ನಾನಾ ಯೋಜನೆಗಳನ್ನು ಜಾರಿಗೊಳಿಸಿ ಅವರ ಸಂಕಷ್ಟಗಳನ್ನು ನಿವಾರಿಸುತ್ತಿದ್ದಾರೆ. ಅಷ್ಟು ಮಾತ್ರವಲ್ಲ ಬಂದರುಗಳ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ದುಡಿಯುತ್ತಿದ್ದಾರೆ.

ಮೀನುಗಾರರ ಆಪತ್ಭಾಂಧವ

ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರ ಸಮರ್ಥ ನಾಯಕತ್ವದಲ್ಲಿ ರಾಜ್ಯದ ಮೀನುಗಾರಿಕಾ ಇಲಾಖೆಯ ಸಾಧನೆಯ ಗ್ರಾಫ್ ಎತ್ತರೆತ್ತಕ್ಕೇರುತ್ತಿದೆ. ಮೀನುಗಾರ ಸಮುದಾಯದ ಸಂಕಷ್ಟಗಳನ್ನು ಚೆನ್ನಾಗಿ ಅರಿತಿರುವ ಮಂಕಾಳ್ ವೈದ್ಯ ಅವರು ಮೀನುಗಾರರ ಕಲ್ಯಾಣಕ್ಕೆ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ.

ರಿಯಾಯಿತಿ ದರದಲ್ಲಿ ಇಂಧನ:

ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಕರಾವಳಿಯ 3 ಜಿಲ್ಲೆಗಳ ನಾಡದೋಣಿ ಮೀನುಗಾರರಿಗೆ ರೂ. 35 ರಿಯಾಯತಿ ದರದಲ್ಲಿ ಕೈಗಾರಿಕಾ ಸೀಮೆ ಎಣ್ಣೆಯನ್ನು ನಿರಂತರವಾಗಿ 2023-24ನೇ ಸಾಲಿನಿಂದ ಪೂರೈಸಲಾಗುತ್ತಿದೆ. ಇದರಿಂದ ನಾಡದೋಣಿ ಮೀನುಗಾರರ ಸೀಮೆಎಣ್ಣೆ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲಾಗಿದೆ. 2023-24 ನೇ ಸಾಲಿನಲ್ಲಿ 7364 ಕಿ. ಲೀ. ಸೀಮೆಎಣ್ಣೆಯನ್ನು 7845 ದೋಣಿಗಳಿಗೆ ರೂ. 30 ಕೋಟಿ ವೆಚ್ಚದಲ್ಲಿ ಪೂರೈಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 11,811.80 ಕಿ.ಲೀ. ಸೀಮೆಎಣ್ಣೆಯನ್ನು 7253 ದೋಣಿಗಳಿಗೆ ಪೂರೈಸಲು ಒಟ್ಟು ರೂ. 30 ಕೋಟಿ ವೆಚ್ಚ ಮಾಡಲಾಗಿದೆ.

            ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ಕರರಹಿತ ಡೀಸೆಲ್‌ನ  ವಾರ್ಷಿಕ ಮಿತಿಯನ್ನು 1.50 ಲಕ್ಷ ಕಿಲೋ ಲೀಟರ್ನಿಂದ 2 ಲಕ್ಷ ಕಿಲೋ ಲೀಟರ್ ಗೆ ಹೆಚ್ಚಿಸಿ ಯಾಂತ್ರೀಕೃತ ದೋಣಿಗಳ ಮಾಲೀಕರ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಲಾಗಿದೆ. 2023-24 ನೇ ಸಾಲಿನಲ್ಲಿ 176259 ಕಿ.ಲೀ. ಡೀಸೆಲ್ ಅನ್ನು 3551 ದೋಣಿಗಳಿಗೆ ಹಾಗೂ 2024-25 ನೇ ಸಾಲಿನಲ್ಲಿ 170455 ಕಿ.ಲೀ. ಡೀಸೆಲ್ ಅನ್ನು 3421 ದೋಣಿಗಳಿಗೆ ವಿತರಿಸಲಾಗಿದೆ.

ಇಂಜಿನ್‌ ಖರೀದಿಗೆ ಸಹಾಯಧನ

ರಾಜ್ಯದಲ್ಲಿ ನೋಂದಣಿಯಾಗಿರುವ ಮೋಟರೀಕೃತ ದೋಣಿಗಳಲ್ಲಿನ 15 ವರ್ಷ ಕಾಲಾವಧಿ ಮೀರಿರುವ ಹಳೆಯ ಇಂಜಿನ್ ಗಳನ್ನು ಬದಲಾಯಿಸಿ, ಹೊಸ ಇಂಜಿನ್ ಖರೀದಿಸಲು ಶೇ.50 ರಷ್ಟು ಸಹಾಯಧನ ನೀಡಲಿದ್ದು, ಮೀನುಗಾರರಿಗೆ ಒಂದು ಲಕ್ಷ ಮಿತಿಗೊಳಪಟ್ಟು ಈ ಸಹಾಯಧನ ನೀಡಲು ಮೀನುಗಾರಿಕೆ ಇಲಾಖೆ ನಿರ್ಧರಿಸಿದೆ . ಪರಿಸರ ಮಾಲಿನ್ಯ ತಡೆಯಲು ಹಾಗೂ ಮೀನುಗಾರಿಕಾ ದೋಣಿಗಳ ಕಾರ್ಯಕ್ಷಮತೆಯನ್ನು ವೃದ್ಧಿಸಲು ಮೋಟರೀಕೃತ ದೋಣಿಗಳ 15 ವರ್ಷ ಕಾಲಾವಧಿ ಮೀರಿರುವ ಹಳೆಯ ಇಂಜಿನ್‌ಗಳನ್ನು ಬದಲಾಯಿಸುವುದು ಅನಿವಾರ್ಯವಾಗಿತ್ತು. ಇದಕ್ಕೆ ಸಹಾಯಧನ ನೀಡಬೇಕಾಗಿ ಮೀನುಗಾರರು ಬಹಳ ವರುಷಗಳಿಂದ ಬೇಡಿಕೆ ಇಟ್ಟಿದ್ದರು. ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸಿದ ಸಚಿವರು ಈ ಯೋಜನೆ ಜಾರಿಗೆ ಕಟಿಬದ್ಧರಾಗಿದ್ದಾರೆ.

            ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ಕರರಹಿತ ಡೀಸೆಲ್‌ನ  ವಾರ್ಷಿಕ ಮಿತಿಯನ್ನು 1.50 ಲಕ್ಷ ಕಿಲೋ ಲೀಟರ್ನಿಂದ 2 ಲಕ್ಷ ಕಿಲೋ ಲೀಟರ್ ಗೆ ಹೆಚ್ಚಿಸಿ ಯಾಂತ್ರೀಕೃತ ದೋಣಿಗಳ ಮಾಲೀಕರ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಲಾಗಿದೆ. 2023-24 ನೇ ಸಾಲಿನಲ್ಲಿ 176259 ಕಿ.ಲೀ. ಡೀಸೆಲ್ ಅನ್ನು 3551 ದೋಣಿಗಳಿಗೆ ಹಾಗೂ 2024-25 ನೇ ಸಾಲಿನಲ್ಲಿ 170455 ಕಿ.ಲೀ. ಡೀಸೆಲ್ ಅನ್ನು 3421 ದೋಣಿಗಳಿಗೆ ವಿತರಿಸಲಾಗಿದೆ.

10,000 ಮೀನುಗಾರರಿಗೆ ವಸತಿ ಭಾಗ್ಯ:

ಕರುನಾಡಿನ 10,000 ಮೀನುಗಾರರಿಗೆ ವಸತಿ ಭಾಗ್ಯ ನೀಡಲು ಮೀನುಗಾರಿಕೆ ಇಲಾಖೆಯಿಂದ ಮತ್ಯಾಶ್ರಯ ಯೋಜನೆಯನ್ನು ಜಾರಿ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ನೇತೃತ್ವದಲ್ಲಿ ಸಮಿತಿ ರಚಿಸಿ, ಫಲಾನುಭವಿಗಳ ಆಯ್ಕೆ ನಡೆಸಿ ಅವರಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡುವ ನಿರ್ಧಾರ ಕೈಗೊಂಡಿದೆ. 

ಮೀನುಗಾರ ಮಹಿಳೆಯರಿಗೆ ಆರ್ಥಿಕ ಬೆಂಬಲ

ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ವಹಿವಾಟು ವಿಸ್ತರಣೆಗೆ ನೆರವಾಗಲು ಬ್ಯಾಂಕುಗಳಲ್ಲಿ ಬಡ್ಡಿರಹಿತವಾಗಿ ನೀಡುವ ಸಾಲದ ಮಿತಿಯನ್ನು ರೂ.50 ಸಾವಿರದಿಂದ ರೂ.3 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿ, ಮಹಿಳಾ ಮೀನುಗಾರರಿಗೆ ಪ್ರೋತ್ಸಾಹ ನೀಡಲಾಗಿದೆ. ಈವರೆಗೆ 2,898 ಮಹಿಳಾ ಫಲಾನುಭವಿಗಳು ರೂ.25.61 ಕೋಟಿ ಸಾಲ ಪಡೆದಿದ್ದಾರೆ.

ಮೀನುಗಾರರಿಗೆ ಸಂಕಷ್ಟ ನಿಧಿ:

ಸಂಕಷ್ಟ ಪರಿಹಾರ ನಿಧಿ ಯೋಜನೆಯಡಿ ಹಿಂದಿನ ಸಾಲುಗಳಲ್ಲಿ ಬಾಕಿ ಉಳಿದಿದ್ದ ವಿವಿಧ ಜಿಲ್ಲೆಗಳ 126 ಮೃತ ಮೀನುಗಾರ ಆವಲಂಬಿತರಿಗೆ ರೂ.7030 ಲಕ್ಷ ಪರಿಹಾರ ನೀಡಲಾಗಿದೆ. 86 ದೋಣಿ/ಬಲೆಹಾನಿ ಪ್ರಕರಣಗಳಲ್ಲಿ ಒಟ್ಟು ರೂ. 1.93 ಕೋಟಿ 2023-24 ನೇ ಸಾಲಿನಲ್ಲಿ ವಿತರಿಸಲಾಗಿದೆ

ಮೀನುಗಾರರಿಗೆ ಸಂಕಷ್ಟ ನಿಧಿ:

ಸಂಕಷ್ಟ ಪರಿಹಾರ ನಿಧಿ ಯೋಜನೆಯಡಿ ಹಿಂದಿನ ಸಾಲುಗಳಲ್ಲಿ ಬಾಕಿ ಉಳಿದಿದ್ದ ವಿವಿಧ ಜಿಲ್ಲೆಗಳ 126 ಮೃತ ಮೀನುಗಾರ ಆವಲಂಬಿತರಿಗೆ ರೂ.7030 ಲಕ್ಷ ಪರಿಹಾರ ನೀಡಲಾಗಿದೆ. 86 ದೋಣಿ/ಬಲೆಹಾನಿ ಪ್ರಕರಣಗಳಲ್ಲಿ ಒಟ್ಟು ರೂ. 1.93 ಕೋಟಿ 2023-24 ನೇ ಸಾಲಿನಲ್ಲಿ ವಿತರಿಸಲಾಗಿದೆ, ಸಂಕಷ್ಟಕ್ಕೀಡಾಗುವ ಮೀನುಗಾರರ ಆರ್ಥಿಕ ನೆರವಿಗಾಗಿ ವಿವಿಧ ಪ್ರಕರಣಗಳಿಗೆ ನೀಡುತ್ತಿರುವ ಪರಿಹಾರ ಮೊತ್ತವನ್ನು ಪರಿಷ್ಕರಿಸಲಾಗಿದೆ. 2024-25 ನೇ ಸಾಲಿನಲ್ಲಿ ಸಂಕಷ್ಟ ಪರಿಹಾರ ನಿಧಿಯಿಂದ 103 ಪ್ರಕರಣಗಳಿಗೆ ರೂ. 558.00 ಲಕ್ಷ, 183 ದೋಣಿ ಹಾನಿ ಪ್ರಕರಣಗಳಿಗೆ ರೂ. 94.99 ಲಕ್ಷ ಮತ್ತು 10 ಮೀನುಗಾರರಿಗೆ ವೈದ್ಯಕೀಯ ವೆಚ್ಚ ಪ್ರಕರಣಗಳಿಗೆ ರೂ.11.63 ಲಕ್ಷ ಪರಿಹಾರ ನೀಡಲಾಗಿದೆ

ನೊಂದವರಿಗೆ ಪರಿಹಾರ:

2022ರಲ್ಲಿ ಉಡುಪಿ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಮತ್ತು ಉತ್ತ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ 32 ಮತ್ತು 20 ಮೋಟರೀಕೃತ ನಾಡದೋಣಿ ಹಾನಿ ಪ್ರಕರಣಗಳಿಗೆ ನಮ್ಮ ಸರ್ಕಾರ ಸಹಾನುಭೂತಿಯಿಂದ ರೂ. 1 ಲಕ್ಷದಂತೆ ಒಟ್ಟು ರೂ.52 ಲಕ್ಷ ಪರಿಹಾರ 2023-245 ಸಾಲಿನಲ್ಲಿ ವಿತರಿಸಿದೆ. ಕುಂದಾಪುರ ತಾಲ್ಲೂಕು ಗಂಗೊಳ್ಳಿ ಗ್ರಾಮದಲ್ಲಿರುವ ಮ್ಯಾಂಗನೀಸ ವಾರ್ನ್ ನಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಹಾನಿಗೊಳಗಾದ ಯಾಂತ್ರೀಕೃತ ದೋಣಿಗಳು/ ಮೋಟರೀಕೃತ ದೋಣಿಗಳು ಮತ್ತು ಬಲೆ ಹಾನಿಗೆ ಸಂಬಂಧಿಸಿದಂತೆ ಒಟ್ಟು 1 ಪ್ರಕರಣಗಳಲ್ಲಿ ಒಟ್ಟು ರೂ. 1.29 ಕೋಟಿ ಪರಿಹಾರ ದೋಣಿ ಮಾಲೀಕರಿಗೆ ವಿತರಿಸಲಾಗಿದೆ.

ಪ.ಜಾ/ಪ.ಪಂ ಮೀನುಗಾರರಿಗೆ ಆರ್ಥಿಕ ನೆರವು

ರಾಜ್ಯ ಮೀನುಗಾರಿಕೆ ಇಲಾಖೆ  ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳಲ್ಲಿ ಆಯ್ಕೆಯಾದ ಮೀನು ಮಾರಾಟಗಾರರಿಗೆ ನಾಲ್ಕು ಚಕ್ರದ ವಾಹನ ಖರೀದಿಸಲು ಆರ್ಥಿಕ ನೆರವು ಘೋಷಿಸಿದೆ. 2025-26 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಕಂಡಿಕೆ – 71 ರಲ್ಲಿ ಘೋಷಿಸಿರುವಂತೆ ನಾಲ್ಕು ಚಕ್ರದ ವಾಹನ ಖರೀದಿಸಲು ಶೇ.50 ರಷ್ಟು ಅಥವಾ ಗರಿಷ್ಠ ರೂ.3.00 ಲಕ್ಷ ಆರ್ಥಿಕ ನೆರವು ನೀಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಈ ಯೋಜನೆಯನ್ನು 2025-26ನೇ ಸಾಲಿನ ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮಗಳು,  ಪರಿಶಿಷ್ಟ ಜಾತಿ ಉಪ ಯೋಜನೆಯಿಂದ ರೂ.250.00 ಲಕ್ಷಗಳು ಹಾಗೂ ಗಿರಿಜನ ಉಪ ಯೋಜನೆ ರೂ.150.00 ಲಕ್ಷಗಳು ಒಟ್ಟು ರೂ.400.00 ಲಕ್ಷಗಳ ಅನುದಾನದ ಮಿತಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಆದೇಶಿಸಿದೆ.

ಬಂದರುಗಳ ಆಧುನೀಕರಣ:

ಭಟ್ಕಳ ತಾಲ್ಲೂಕಿನ ಮುರುಡೇಶ್ವರದಲ್ಲಿ ಸುಸಜ್ಜಿತ ಮೀನುಗಾರಿಕೆ ಹೊರಬಂದರು ನಿರ್ಮಾಣ ಕಾಮಗಾರಿಯನ್ನು ರೂ.398.50 ಕೋಟಿಗಳ ವೆಚ್ಚವಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮೀನುಗಾರಿಕಾ ಬಂದರುಗಳ ಆಧುನೀಕರಣ ಯೋಜನೆಯಡಿ ರೂ.37.47 ಕೋಟಿ ಯೋಜನಾ ವೆಚ್ಚದಲ್ಲಿ ಮಂಗಳೂರು ಮೀನುಗಾರಿಕೆ ಬಂದರು. ರೂ.12.52 ಕೋಟಿ ಯೋಜನಾ ವೆಚ್ಚದಲ್ಲಿ ಮಲ್ಲೆ ಮೀನುಗಾರಿಕೆ ಬಂದರು ಹಾಗೂ ರೂ.22.18 ಕೋಟಿ ಯೋಜನಾ ವೆಚ್ಚದಲ್ಲಿ ಗಂಗೊಳ್ಳಿ ಮೀನುಗಾರಿಕೆ ಬಂದರುಗಳ ಆಧುನೀಕರಣ ಕೈಗೊಳ್ಳಲು ಕೇಂದ್ರ ಸ  ರ್ಕಾರದ ಮಂಜೂರಾತಿ ಪಡೆಯಲಾಗಿದೆ.

            ಮೀನುಗಾರಿಕೆ ಬಂದರುಗಳಲ್ಲಿ ಹೂಳೆತ್ತುವ ಯೋಜನೆಯಡಿ ರೂ.5.61ಕೋಟಿ ಯೋಜನಾ ವೆಚ್ಚದಲ್ಲಿ ಆಮದಳ್ಳಿ ಮೀನುಗಾರಿಕೆ ಬಂದರು. ರೂ.4.14 ಕೋಟಿ ಯೋಜನಾ ವೆಚ್ಚದಲ್ಲಿ ಬೇಲಿಕೇರಿ ಮತ್ತು ಹಾರವಾಡ ಮೀನುಗಾರಿಕೆ ಬಂದರು ಹಾಗೂ ರೂ.2.65 ಕೋಟಿ ಯೋಜನಾ ವೆಚ್ಚದಲ್ಲಿ ತದಡಿ ಮೀನುಗಾರಿಕೆ ಬಂದರುಗಳಲ್ಲಿ ಹೂಳೆತ್ತಲು ಕೇಂದ್ರ ಸರ್ಕಾರದಿಂದ ಮಂಜೂರಾತಿ ಪಡೆಯಲಾಗಿದೆ. ಹಲವು ವರ್ಷಗಳಿಂದ ಅಪೂರ್ಣವಾಗಿದ್ದ ಮಂಗಳೂರು ಮೀನುಗಾರಿಕಾ ಬಂದರಿನ 3ನೇ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಲು ರೂ 49.50 ಕೋಟಿ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಉಡುಪಿ ಜಿಲ್ಲೆಯ ಹೆಜಮಾಡಿಕೋಡಿ ಮೀನುಗಾರಿಕೆ ಬಂದರಿನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಂದಾಜು ವೆಚ್ಚವನ್ನು ರೂ. 209.13 ಕೋಟಿಗಳಿಗೆ ಪರಿಷ್ಕರಿಸಿ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಹೆಚ್ಚುವರಿ ಮೊತ್ತ ರೂ.20.40 ಕೋಟಿ ಬಿಡುಗಡೆ ಮಾಡಲಾಗಿದೆ.

ಕೊಂಡಿ ರಸ್ತೆ ದುರಸ್ಥಿ:

ಕರಾವಳಿ ಕೊಂಡಿ ರಸ್ತೆಗಳ ದುರಸ್ತಿ ಹಾಗೂ ಅಭಿವೃದ್ಧಿಗೆ 2023-24ನೇ ಸಾಲಿನಲ್ಲಿ ರೂ.23.43 ಕೋಟಿ ಅನುದಾನಕ್ಕೆ ಮಂಜೂರಾತಿ ನೀಡಲಾಗಿದೆ.

ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆ: ನಬಾರ್ಡ್ ನೆರವಿನ ಯೋಜನೆಯಡಿ ರೂ. 40.90ಕೋಟಿ ಅನುದಾನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಅಯ್ಯನ ಕೆರೆ ಉತ್ಪಾದನಾ ಕೇಂದ್ರದ ಸುಧಾರಣೆ, ಶಿವಮೊಗ್ಗ ಜಿಲ್ಲೆಯ ಬಿಆರ್ ಪ್ರಾಜೆಕ್ಟ್ ಹಾಗೂ ಗಾಜನೂರಿನ ಮೀನು ಮರಿ ಉತ್ಪಾದನಾ ಕೇಂದ್ರದ ಅಭಿವೃದ್ಧಿ ಹಾಗೂ ಉನ್ನತೀಕರಣ, ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಮೀನು ಮರಿ ಉತ್ಪಾದನಾ ಕೇಂದ್ರದ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 16 ಮೀನು ಮರಿ ಉತ್ಪಾದನಾ ಕೇಂದ್ರಗಳಿದ್ದು ಪ್ರಸ್ತುತ ಸಾಲಿನಲ್ಲಿ ಇಲ್ಲಿಯವರೆಗೆ 134.80 ಕೋಟಿ ಮೀನು ಮರಿ ಉತ್ಪಾದಿಸಲಾಗಿದೆ.

            ಮೀನುಗಾರಿಕೆ ಬಂದರುಗಳಲ್ಲಿ ಹೂಳೆತ್ತುವ ಯೋಜನೆಯಡಿ ರೂ.5.61ಕೋಟಿ ಯೋಜನಾ ವೆಚ್ಚದಲ್ಲಿ ಆಮದಳ್ಳಿ ಮೀನುಗಾರಿಕೆ ಬಂದರು. ರೂ.4.14 ಕೋಟಿ ಯೋಜನಾ ವೆಚ್ಚದಲ್ಲಿ ಬೇಲಿಕೇರಿ ಮತ್ತು ಹಾರವಾಡ ಮೀನುಗಾರಿಕೆ ಬಂದರು ಹಾಗೂ ರೂ.2.65 ಕೋಟಿ ಯೋಜನಾ ವೆಚ್ಚದಲ್ಲಿ ತದಡಿ ಮೀನುಗಾರಿಕೆ ಬಂದರುಗಳಲ್ಲಿ ಹೂಳೆತ್ತಲು ಕೇಂದ್ರ ಸರ್ಕಾರದಿಂದ ಮಂಜೂರಾತಿ ಪಡೆಯಲಾಗಿದೆ. ಹಲವು ವರ್ಷಗಳಿಂದ ಅಪೂರ್ಣವಾಗಿದ್ದ ಮಂಗಳೂರು ಮೀನುಗಾರಿಕಾ ಬಂದರಿನ 3ನೇ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಲು ರೂ 49.50 ಕೋಟಿ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಉಡುಪಿ ಜಿಲ್ಲೆಯ ಹೆಜಮಾಡಿಕೋಡಿ ಮೀನುಗಾರಿಕೆ ಬಂದರಿನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಂದಾಜು ವೆಚ್ಚವನ್ನು ರೂ. 209.13 ಕೋಟಿಗಳಿಗೆ ಪರಿಷ್ಕರಿಸಿ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಹೆಚ್ಚುವರಿ ಮೊತ್ತ ರೂ.20.40 ಕೋಟಿ ಬಿಡುಗಡೆ ಮಾಡಲಾಗಿದೆ.

ವಿದ್ಯಾನಿಧಿ ಯೋಜನೆ

ಮೀನುಗಾರರ ಮಕ್ಕಳ “ವಿದ್ಯಾನಿಧಿ” ಯೋಜನೆಯಡಿ 2024-25ನೇ ಸಾಲಿನಲ್ಲಿ 1416 ಮಕ್ಕಳಿಗೆ ರೂ.82.19 ಲಕ್ಷ ವಿದ್ಯಾರ್ಥಿ ವೇತನ ಪಾವತಿಸಲಾಗಿದೆ.

ಮೀನುಗಾರಿಕಾ ಕಾಲೇಜಿನ ಸೀಟ್‌ ದ್ವಿಗುಣ

ಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯಾಬಲ ಹೆಚ್ಚಿಸುವ ಸಲುವಾಗಿ ಸೀಟ್‌ ಸಂಖ್ಯೆಯನ್ನು ದ್ವಿಗುಣಗೊಳಿಸುವ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಯುವ ವಿದ್ಯಾರ್ಥಿಗಳಲ್ಲಿ ಮತ್ಸ್ಯಕೃಷಿಯ ಬಗ್ಗೆ ಆಸಕ್ತಿ ಹೆಚ್ಚಿಸಿ, ಮೀನುಗಾರಿಕೆ ಕಡೆ ಒಲವು ತೋರುವಂತೆ ಮಾಡಲು ಈಗಿರುವ ಸೀಟಿನ ಸಂಖ್ಯೆಯನ್ನು 52 ರಿಂದ 104 ಕ್ಕೆ ಏರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕಾಗಿ ರೂ.500.00 ಲಕ್ಷ ಅನುದಾನವನ್ನು ಸರ್ಕಾರ ಮೀಸಲಿಟ್ಟಿದೆ.

ಮತ್ಸ್ಯ ಆಶಾಕಿರಣ:

ಮತ್ಸ್ಯ ಆಶಾಕಿರಣ ಯೋಜನೆಯಡಿ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಕರಾವಳಿಯ ಮೀನುಗಾರರಿಗೆ ನೀಡುತ್ತಿರುವ ಪರಿಹಾರ ಮೊತ್ತದ ರಾಜ್ಯದ ಪಾಲನ್ನು 1,500 . 3,000 ಹೆಚ್ಚಿಸಲಾಗಿದ್ದು, 17,186 ಫಲಾನುಭವಿಗಳು ಯೋಜನೆಯಡಿ ಪ್ರಯೋಜನ ಪಡೆಯಲಿದ್ದಾರೆ.

ಸಮುದ್ರದ ಆಂಬುಲೆನ್ಸ್‌:

ಸಮುದ್ರ ಮೀನುಗಾರಿಕೆಗೆ ತೆರಳಿದಾಗ ಅಪಘಾತ ಅಥವಾ ಅನಾರೋಗ್ಯಕ್ಕೆ ಒಳಗಾಗುವ ಮೀನುಗಾರರನ್ನು ತ್ವರಿತವಾಗಿ ದಡಕ್ಕೆ ತರಲು ರಾಜ್ಯದಲ್ಲಿ ಪ್ರಪ್ರಥಮ ಸಮುದ್ರದ ಆಂಬುಲೆನ್ಸ್ ರೂ. 7 ಕೋಟಿ ವೆಚ್ಚದಲ್ಲಿ 2024-25ನೇ ಸಾಲಿನಲ್ಲಿ ಖರೀದಿಸಲು ಟೆಂಡರ್ ಅಂತಿಮಗೊಳಿಸಲಾಗಿದೆ.

ಕೃತಕ ಬಂಡೆಗಳ ಸ್ಥಾಪನೆ:

ಸುಸ್ಥಿರ ಮೀನುಗಾರಿಕೆ ನಿರ್ವಹಣೆಗಾಗಿ ಸಮುದ್ರ ಮೀನುಗಾರಿಕೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಆಹಾರ ಭದ್ರತೆ ಕಲಿಸಲು ಹಾಗೂ ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯಕ್ಕಾಗಿ ರಾಜ್ಯದ ಮೂರು ಕರಾವಳಿ ಜಿಲ್ಲೆಗಳಲ್ಲಿ ರೂ. 17.36 ಕೋಟಿ ಯೋಜನಾ ವೆಚ್ಚದಲ್ಲಿ 56 ಆಯ್ದ ಸ್ಥಳಗಳಲ್ಲಿ ಕೃತಕ ಬಂಡೆಗಳನ್ನು ಸ್ಥಾಪಿಸಲಾಗುತ್ತಿದೆ. ಇದರ ಮೊದಲ ಭಾಗವಾಗಿ ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ 10 ಸ್ಥಳಗಳಲ್ಲಿ ಕೃತಕ ಬಂಡೆಗಳನ್ನು ಅಳವಡಿಸಲಾಗಿದೆ ಮುಂದಿನ ದಿನಗಳಲ್ಲಿ ಉಳಿದ 46 ಸ್ಥಳಗಳಲ್ಲಿ ಕೃತಕ ಬಂಡೆಗಳನ್ನು ಸ್ಥಾಪಿಸಲಾಗುವುದು. ಅಲ್ಲದೇ ಎರಡನೇ ಹಂತದ ಕೃತಕ ಬಂಡೆಗಳ ಅಳವಡಿಕೆಗೆ ರೂ.15.50ಕೋಟಿ ವೆಚ್ಚದ ಯೋಜನಾ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.

ಹಕ್ಕಿನ ಗುತ್ತಿಗೆ ವಿಸ್ತರಣೆ:

2023-24ನೇ ಸಾಲಿನಲ್ಲಿ ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಹಿನ್ನೆಲೆಯಲ್ಲಿ ಒಳನಾಡು ಕೆರೆ/ ಜಲಾಶಯಗಳ ಮೀನುಪಾಶುವಾರು ಹಕ್ಕಿನ ಗುತ್ತಿಗೆ ಅವಧಿಯನ್ನು 2023-24ನೇ ಸಾಲಿಗೆ ನವೀಕರಿಸಿಕೊಂಡಿರುವ ಗುತ್ತಿಗೆದಾರರು/ಟೆಂಡರ್ ದಾರರುಗಳಿಗೆ ಪಾವತಿ ಸಹಿತವಾಗಿ ಒಂದು ವರ್ಷದ ಅವಧಿಗೆ ವಿಸ್ತರಿಸಿದ ಹಿನ್ನೆಲೆಯಲ್ಲಿ 1139 ಗುತ್ತಿಗೆದಾರರು ಪ್ರಯೋಜನ ಪಡೆದಿದ್ದಾರೆ.

ಹೈ-ಟೆಕ್‌ ಮತ್ಸ್ಯದರ್ಶಿನಿ ಸ್ಥಾಪನೆ

ರಾಜ್ಯ ಮೀನುಗಾರಿಕೆ ಇಲಾಖೆ ಮೈಸೂರಿನಲ್ಲಿ ಹೈ-ಟೆಕ್‌ ಮತ್ಸ್ಯದರ್ಶಿನಿ ಪ್ರಾರಂಭಿಸಲು ನಿರ್ಧರಿಸಿದೆ. ಮೈಸೂರು ಜನಪ್ರಿಯ ಪ್ರವಾಸಿ ತಾಣ ಹಾಗೂ ಸಾಂಸ್ಕೃತಿಕ ನಗರಿಯಾಗಿದ್ದು ಇಲ್ಲಿಗೆ ದೇಶ, ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಇವರಿಗೆ ಶುಚಿ ಹಾಗೂ ರುಚಿ ಭರಿತ ಮೀನು ಖಾದ್ಯಗಳನ್ನ ನೀಡುವ ಸಲುವಾಗಿ ಹೈ-ಟೆಕ್‌ ಮತ್ಸ್ಯದರ್ಶಿನಿ ಪ್ರಾರಂಭಿಸುವ ಸಂಕಲ್ಪವನ್ನು ಸಚಿವ ಮಂಕಾಳ್‌ ಎಸ್‌ ವೈದ್ಯ ಮಾಡಿದ್ದಾರೆ.

 

            ಇಂಥಾ ಹತ್ತು ಹಲವು ಜನಪರ ಯೋಜನೆಗಳೊಂದಿಗೆ ಸಚಿವ ಮಂಕಾಳ್‌ ಎಸ್‌ ವೈದ್ಯ ಅವರು ಮೀನುಗಾರಿಕೆ, ಬಂದರುಗಳ ಅಭಿವೃದ್ಧಿಯ ಜೊತೆಗೆ ಪ್ರವಾಸೋದ್ಯಮ ಹಾಗೂ ಮೀನುಗಾರ ಸಮುದಾಯದ ಏಳಿಗೆಯತ್ತಲೂ ವಿಶೇಷ ಕಾಳಜಿ ವಹಿಸಿದ್ದಾರೆ. ಒಟ್ಟಾರೆ ಮಂಕಾಳ ಎಸ್  ವೈದ್ಯ ಅವರ ನೇತೃತ್ವದಲ್ಲಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜನಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಯ ಮಂತ್ರ ಮೊಳಗುತ್ತಿದೆ.

Join Mankal Vaidya Team / ಮಂಕಾಳ ಎಸ್‌ ವೈದ್ಯತಂಡಕ್ಕೆ ಸೇರಿ

Mankal S Vaidya, Minister for Fisheries, Ports and Inland Water Transport -Govt.of Karnataka. District In-charge Minister - Uttara Kannada.

Mankal S Vaidya Contact Number / ಮಂಕಾಳ ಎಸ್‌ ವೈದ್ಯ +91 81510 07704

Quick Links

Mankal S Vaidya 2023 All Rights Reserved 

Translate »