Mankal S. Vaidya is an Indian politician from Karnataka. He is currently serving as Cabinet Minister in Government of Karnataka and as a member of Karnataka Legislative Assembly representing Bhatka
ಮಂಕಾಳ ಎಸ್ ವೈದ್ಯ, ಇವರು ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವರಾಗಿ 20 ಮೇ 2023 ರಂದು ಅಧಿಕಾರ ಸ್ವೀಕರಿಸಿದರು. ಇವರು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ – ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಇಂಡಿಯನ್‌ನ್ಯಾಷನಲ್‌ಕಾಂಗ್ರೆಸ್‌ಪಕ್ಷದಿಂದ ಸ್ಪರ್ಧಿಸಿರುವ ಮಂಕಾಳ ಎಸ್‌ವೈದ್ಯ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಸುನಿಲ್‌ನಾಯ್ಕ ಸಿ ಅವರನ್ನು ಸೋಲಿಸಿ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದ್ರು.
ಮಂಕಾಳ ಎಸ್‌ವೈದ್ಯ ಅವರು ರಾಜಕೀಯ ಕ್ಷೇತ್ರದಲ್ಲಿ ಹಂತ ಹಂತವಾಗಿ ಬೆಳೆದ ಹಿರಿಯ ಹಾಗೂ ಅನುಭವಿ ರಾಜಕಾರಣಿಯಾಗಿದ್ದಾರೆ. 2005ರಲ್ಲಿ ರಾಜಕೀಯ ಕ್ಷೇತ್ರಕ್ಕೆ ಅಡಿ ಇಟ್ಟ ಮಂಕಾಳ ಎಸ್‌ವೈದ್ಯ ಅವರು ಮಾವಳ್ಳಿ ಜಿಲ್ಲಾ ಪಂಚಾಯತ್ ಚುನಾವಣಾ ಕಣಕ್ಕಿಳಿದು ಜಯಗಳಿಸಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದರು. ಈ ವೇಳೆ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ ಮಂಕಾಳ ಎಸ್‌ವೈದ್ಯ ಮನೆಮಾತಾದ್ರು. ಹಾಗಾಗಿ 2010 ರಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಬಹುಮತದಿಂದ ಗೆಲುವನ್ನು ಸಾಧಿಸಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾದ್ರು. ತನಗೆ ಸಿಕ್ಕ ಜನಸೇವೆಯ ಅವಕಾಶವನ್ನು ಸದ್ವಿನಿಯೋಗ ಮಾಡಿ, ಇಡೀ ಜಿಲ್ಲೆ ಸುತ್ತಾಡಿದರು. ಜನರ ನೋವು ನಲಿವುಗಳ ಅಧ್ಯಯನ ಮಾಡಿದ್ರು. ಕುಗ್ರಾಮಗಳಿಗೆ ಭೇಟಿಕೊಟ್ಟು ಅಲ್ಲಿನ ಜನರ ಸಮಸ್ಯೆಗಳನ್ನು ಅರಿತುಕೊಂಡ್ರು. ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಸೌಲಭ್ಯಗಳು ತಲುಪುವಂತೆ ಮಾಡಿದರು. ಗ್ರಾಮೀಣ ಜನರ ಕಲ್ಯಾಣಕ್ಕೆ ಕಂಕಣ ಬದ್ಧರಾಗಿ ಕಾರ್ಯ ನಿರ್ವಹಿಸಿದರು. ತನ್ನ ಕ್ಷೇತ್ರದ ಜನರಿಗೆ ಇನ್ನಷ್ಟು ಸೇವೆ ಸಲ್ಲಿಸುವ ಮಹದುದ್ದೇಶದಿಂದ 2013 ರಲ್ಲಿ ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದರು. ಜನರ ಅಪಾರ ಬೆಂಬಲದೊಂದಿಗೆ ಪಕ್ಷೇತರರಾಗಿ ಸ್ಪರ್ಧಿಸಿ ಪ್ರಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
ಮಂಕಾಳ ಎಸ್‌ವೈದ್ಯ ಅವರು 2014ರಲ್ಲಿ ಇಂಡಿಯನ್‌ನ್ಯಾಷನಲ್ ಕಾಂಗ್ರೆಸ್‌ಸೇರ್ಪಡೆಯಾದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ-ಹೊನ್ನಾವರ ಕ್ಷೇತ್ರದಿಂದ ಸ್ಪರ್ಧಿಸಿದರು. ಆದ್ರೆ ವಿರೋಧ ಪಕ್ಷದವರ ಪಿತೂರಿ ಹಾಗೂ ಅಪಪ್ರಚಾರದಿಂದ ಸೋಲನುಭವಿಸಬೇಕಾಯಿತು. ಆದ್ರೆ ಸೋಲಿಗೆ ಕುಗ್ಗದೆ, ಪಿತೂರಿಗೆ ಜಗ್ಗದೆ ಜನಸೇವೆ ಮುಂದುವರಿಸಿದರು. ಬಡವರ, ವಿದ್ಯಾರ್ಥಿಗಳ ನೋವಿಗೆ ಸ್ಪಂದಿಸಿದರು. ಕ್ಷೇತ್ರದ ಜನರ ಸೇವೆಗೆ ಕಂಕಣಬದ್ಧವಾಗಿ ದುಡಿದರು. ಪರಿಣಾಮವಾಗಿ 2023 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಅಭೂತಪೂರ್ವ ಗೆಲುವನ್ನು ಸಾಧಿಸಿದರು.
ಮಂಕಾಳ ಎಸ್‌ವೈದ್ಯ ಅವರು 05 ಜೂನ್ 1973 ರಂದು ಶ್ರೀಮತಿ ಭಾಗೀರತಿ ಹಾಗೂ ಶ್ರೀ ಸುಬ್ಬ ವೈದ್ಯ ಎಂಬ ದಂಪತಿಯ ಐದನೇ ಮಗನಾಗಿ ಭಟ್ಕಳ ತಾಲೂಕಿನ ಬೈಲೂರು ಕೊಪ್ಪದಮಕ್ಕಿ ಗ್ರಾಮದಲ್ಲಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೊಪ್ಪದಮಕ್ಕಿಯಲ್ಲಿ ಹಾಗೂ ಪ್ರೌಢ ಶಿಕ್ಷಣ ಜನತಾ ವಿದ್ಯಾಲಯ ಮುರುಡೇಶ್ವರದಲ್ಲಿ ಮಾಡಿದರು. ಮಂಕಾಳ್‌ಎಸ್‌ವೈದ್ಯ ಅವರು ಶಿಕ್ಷಣ ಕ್ಷೇತ್ರಕ್ಕೆ ಅತೀ ಹೆಚ್ಚಿನ ಮಹತ್ವ ನೀಡಿದ್ದಾರೆ. ಅವರು ಅದೆಷ್ಟೋ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಿ ಅವರ ಬಾಳು ಬೆಳಗಿಸಿದ್ದಾರೆ. ಕ್ಷೇತ್ರದ ಯಾವುದೇ ಮಗು ಶಿಕ್ಷಣದಿಂದ ವಂಚಿರಾಗಬಾರದು ಅನ್ನೋ ಕಾರಣಕ್ಕೆ ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿ, ಶಾಲೆಗಳಿಗೆ ಬೇಕಾದ ಸೌಲಭ್ಯಗಳನ್ನೆಲ್ಲಾ ಒದಗಿಸಿ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಕಲ್ಪಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಭಟ್ಕಳದಲ್ಲಿ ಬೀನಾ ವಾಣಿಜ್ಯ ಮತ್ತು ವಿಜ್ಞಾನ ಶಿಕ್ಷಣ ಸಂಸ್ಥೆಯನ್ನು ಸಂಸ್ಥಾಪಿಸಿ, ಕ್ಷೇತ್ರದ ಮಕ್ಕಳ ಉನ್ನತ ಶಿಕ್ಷಣದ ಕನಸನ್ನು ನನಸುಗೊಳಿಸುತ್ತಿದ್ದಾರೆ.
ಯಶಸ್ವಿ ಉದ್ಯಮಿ–ಜನಸೇವಕ: ಮಂಕಾಳ ಎಸ್‌ವೈದ್ಯ ಅವರು ಮುತ್ಸದ್ದಿ ರಾಜಕಾರಣಿ ಮಾತ್ರವಲ್ಲ ಅವರು ಯಶಸ್ವಿ ಉದ್ಯಮಿಯೂ ಹೌದು. ಇವರು ತಮ್ಮ ಆರಂಭದ ದಿನದಲ್ಲಿ ಮುರುಡೇಶ್ವರದಲ್ಲಿ ಒಂದು ಕರಾವಳಿ ಹೋಟೆಲ್ ಆರಂಭಿಸಿದರು. ಹಸಿದು ಬಂದ, ವಿದ್ಯಾರ್ಥಿಗಳಿಗೆ, ಬಡವರಿಗೆ ಕಡಿಮೆ ದರದಲ್ಲಿ ಊಟ ನೀಡಿ ಅವರ ಹಸಿವು ನೀಗಿಸಿದರು. ವೈದ್ಯ ಅವರ ವಿಶಾಲ ಹೃದಯ ಹಾಗೂ ವೃತ್ತಿ ಪರತೆಯಿಂದ ಹೋಟೆಲ್ ಉದ್ಯಮ ಅದ್ಭುತ ಯಶಸ್ಸನ್ನು ಕಂಡಿತು. ಆದ್ರೂ ಇನ್ನಷ್ಟು ಸಾಧನೆ ಮಾಡಬೇಕೆಂಬ ಛಲ ವೈದ್ಯ ಅವರನ್ನು ಮೀನು ಉದ್ಯಮದತ್ತ ಮುಖ ಮಾಡುವಂತೆ ಮಾಡಿತು. ಆರಂಭದ ದಿನಗಳಲ್ಲಿ ಮಂಕಾಳ ಎಸ್‌ವೈದ್ಯ ಅವರು ಸಾಕಷ್ಟು ಕಷ್ಟಪಟ್ಟರು. ಭಟ್ಕಳ ಬಂದರಿನಲ್ಲಿ ಮಳೆ ಬಿಸಿಲೆನ್ನದೆ ದುಡಿದರು. ಇವರು ಬರಿ ನೆಲದ ಮೇಲೆ ನ್ಯೂಸ್ ಪೇಪರ್ ಹಾಸಿ ಬಂದರಿನಲ್ಲೇ ಮಲಗಿ ರಾತ್ರಿ ಕಳೆದ ದಿನಗಳಿಗೆ ಲೆಕ್ಕವೇ ಇಲ್ಲ. ಹೀಗೆ ಕಠಿಣ ಪರಿಶ್ರಮದಿಂದ ಗೆಲುವಿನ ನಗೆ ಬೀರಿ ಮತ್ಸ್ಯೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು.
ಮಂಕಾಳ ಎಸ್‌ವೈದ್ಯ ಅವರದ್ದು ಅಪರೂಪದ ವ್ಯಕ್ತಿತ್ವ. ತಾನು ಮತ್ಸ್ಯೋದ್ಯಮದಲ್ಲಿ ಗಳಿಸಿದ ಬಹುಪಾಲು ಹಣವನ್ನು ಜನಸೇವೆಗೆ ಮುಡಿಪಾಗಿಟ್ಟರು. ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚಿದರು. ನಂಬಿ ಬಂದವರ ಕೈಬಿಡದೆ ಅವರ ಬಾಳು ಬೆಳಗಿದರು. ಶಿಕ್ಷಣದ ಮಹತ್ವ ಅರಿತಿದ್ದ ಮಂಕಾಳ ಎಸ್‌ವೈದ್ಯ ಅವರು ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸಿ ಅವರ ಬಾಳು ಬೆಳಗಿದರು. ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿ ಶಿಕ್ಷಣ ಪ್ರೇಮಿ ಎನಿಸಿಕೊಂಡರು. ಶಿಕ್ಷಣ ಕ್ಷೇತ್ರದ ಜೊತೆ ಜೊತೆಗೆ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೂ ತಮ್ಮನ್ನು ತಾವು ತೊಡಗಿಸಿಕೊಂಡರು. ಶಾಸಕರಾಗಿ ಮಂಕಾಳ ಎಸ್‌ವೈದ್ಯ ಅವರು ತಮ್ಮ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮೆರೆದರು. ಹಾಗಾಗಿ ಭಟ್ಕಳ-ಹೊನ್ನಾವರದ ಜನ ಇವರಿಗೆ ‘ಅಭಿವೃದ್ಧಿಯ ಹರಿಕಾರ’ ಎಂಬ ಬಿರುದು ನೀಡಿ ಶ್ಲಾಘಿಸಿದರು.
ತಮ್ಮನ್ನು ಶಾಸಕನಾಗಿ ಆಯ್ಕೆ ಮಾಡಿದ ಜನರ ನಿರೀಕ್ಷೆಯನ್ನು ಎಂದೂ ಹುಸಿ ಮಾಡದ ಮಂಕಾಳ ಎಸ್‌ವೈದ್ಯ ಅವರು ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ ಅಭೂತಪೂರ್ವವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ರು. ಅದ್ರಲ್ಲೂ ಸಂಪರ್ಕ ಸೇತುವೆ ಇಲ್ಲದೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದ ಅದೆಷ್ಟೋ ಕುಗ್ರಾಮಗಳಿಗೆ ಸೇತುವೆಗಳನ್ನು ಕಟ್ಟಿಸಿ ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ನೂರಾರು ಹಳ್ಳಿಗಳ ಭವಿಷ್ಯವನ್ನೇ ಬದಲಾಯಿಸಿದರು. ಇವರ ಸಾಧನೆಯನ್ನು ಮೆಚ್ಚಿದ ಕ್ಷೇತ್ರದ ಜನರು ಇವರನ್ನು ಸೇತುವೆಗಳ ಸರದಾರನೆಂದು ಕೊಂಡಾಡಿದರು.
ಮಂಕಾಳ ಎಸ್‌ವೈದ್ಯ ಅವರು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾಗಿ ಹಾಗೂ ಉತ್ತರ ಕನ್ನಡದ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಯ್ಕೆಯಾದ ಬಳಿಕವಂತೂ ಬರೀ ತಮ್ಮ ಕ್ಷೇತ್ರ ಮಾತ್ರವಲ್ಲ ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲೇ ಅಭಿವೃದ್ಧಿಯ ಪರ್ವ ಪ್ರಾರಂಭವಾಗಿದೆ. ಅದೇ ಉತ್ಸಾಹ, ಅದೇ ಹುರುಪಿನೊಂದಿಗೆ ನಾಡಿನ ಜನರ ಏಳಿಗೆಗೆ ಶ್ರಮಿಸುತ್ತಿರುವ ಮಂಕಾಳ ವೈದ್ಯ ಅವರು ಸಚಿವರಾಗಿ ಒಂದು ವರ್ಷದಲ್ಲಿ ಅದ್ಭುತ ಸಾಧನೆ ಮೆರೆದಿದ್ದಾರೆ. ಮೀನುಗಾರ ಸಮುದಾಯದ ನೋವಿಗೆ ಸ್ಪಂದಿಸಿ, ನಾನಾ ಯೋಜನೆಗಳನ್ನು ಜಾರಿಗೊಳಿಸಿ ಅವರ ಸಂಕಷ್ಟಗಳನ್ನು ನಿವಾರಿಸುತ್ತಿದ್ದಾರೆ.
ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರ ಸಮರ್ಥ ನಾಯಕತ್ವದಲ್ಲಿ ರಾಜ್ಯದ ಮೀನುಗಾರಿಕಾ ಇಲಾಖೆಯ ಸಾಧನೆಯ ಗ್ರಾಫ್ ಎತ್ತರೆತ್ತಕ್ಕೇರುತ್ತಿದೆ. 2021-2022 ರಲ್ಲಿ 10.7ಲಕ್ಷ ಮೆಟ್ರಿಕ್ ಟನ್ ಇದ್ದ ರಾಜ್ಯದ ಒಟ್ಟು ಮೀನು ಉತ್ಪಾದನೆಯ ಪ್ರಮಾಣ 2022-2023ರಲ್ಲಿ 12.30 ಲಕ್ಷ ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ. 2021-2022ರಲ್ಲಿ ರಾಜ್ಯದಿಂದ ಸಾಗರೋತ್ಪನ್ನಗಳ ರಫ್ತು 1962 ಕೋಟಿ ರೂಪಾಯಿ ಮೌಲ್ಯದ್ದಾಗಿತ್ತು. ಈ ಪ್ರಮಾಣ 2022-2023ಕ್ಕೆ 3769 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಸರ್ಕಾರ ಮೀನುಗಾರರ ಹಿತ ರಕ್ಷಣೆಗೆ ಸದಾ ಕಟಿಬದ್ಧವಾಗಿದೆ. ಮೀನುಗಾರ ಸಮುದಾಯದ ಸಂಕಷ್ಟಗಳನ್ನು ಚೆನ್ನಾಗಿ ಅರಿತಿರುವ ಮೀನುಗಾರ ಸಚಿವರಾದ ಮಂಕಾಳ್ ವೈದ್ಯ ಅವರು ಮೀನುಗಾರರ ಕಲ್ಯಾಣಕ್ಕೆ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಅದ್ರಲ್ಲಿ ಅತ್ಯಂತ ಪ್ರಮುಖವಾಗಿರುವುದು ಮೀನುಗಾರರಿಗೆ ರಿಯಾಯಿತಿ ದರದಲ್ಲಿ ಇಂಧನ ಪೂರೈಕೆ ಮಾಡುವುದು.ಸರ್ಕಾರ ನೀಡುತ್ತಿರುವ ಕರರಹಿತ ಡೀಸೆಲ್ ಮತ್ತು ನಾಡದೋಣಿಗಳಿಗೆ ರಿಯಾಯಿತಿ ದರದಲ್ಲಿ ಸೀಮೆಎಣ್ಣೆ ವಿತರಣೆ ಮತ್ತು ಸೀಮೆಎಣ್ಣೆ ಇಂಜಿನ್‌ನನ್ನು ಹೈಬ್ರೀಡ್‌ಇಂಜಿನ್‌ಗೆ ಬದಲಾಯಿಸಲು ಸಹಾಯಧನ, ಮಂಜುಗಡ್ಡೆ ಸ್ಥಾವರಗಳು ಬಳಸುವ ವಿದ್ಯುತ್‌ಗೆ ಸಹಾಯಧನ ಇವೆಲ್ಲವೂ ಮೀನುಗಾರರ ಬದುಕಲ್ಲಿ ಆಶಾಕಿರಣ ಮೂಡಿಸಿದೆ.
ಇನ್ನು ಮೀನುಗಾರಿಕೆಯ ಸಂದರ್ಭದಲ್ಲಿ ಮೀನುಗಾರರ ಪ್ರಾಣಕ್ಕೆ ಏನಾದ್ರೂ ಕುತ್ತಾದ್ರೆ ಅವರ ಕುಟುಂಬಕ್ಕೆ 24 ಗಂಟೆಯೊಳಗೆ 6 ಲಕ್ಷ ರೂಪಾಯಿ ಸಂಕಷ್ಟ ಪರಿಹಾರ ನಿಧಿ ವಿತರಿಸುತ್ತದೆ. ಅಷ್ಟೇ ಅಲ್ಲದೆ ಅಪಘಾತ ಪರಿಹಾರವನ್ನೂ ಅಷ್ಟೇ ಮುತುವರ್ಜಿಯಿಂದ ನೀಡಿ ಮೀನುಗಾರರ ಕಣ್ಣೀರು ಒರೆಸುತ್ತಿದೆ. ಇಷ್ಟು ಮಾತ್ರವಲ್ಲ ಮೀನುಗರರ ಶ್ರೇಯೋಭಿವೃದ್ಧಿಗಾಗಿ ವಸತಿರಹಿತ ಮೀನುಗಾರರಿಗೆ ಮತ್ಸ್ಯಾಶ್ರಯ ಯೋಜನೆಯಡಿ ಈಗಾಗಲೇ 5000 ಸಾವಿರ ಮನೆಗಳನ್ನು ಹಂಚಲಾಗಿದೆ. ಇನ್ನೂ ಸರ್ಕಾರ ಸುಮಾರು ಐದು ಸಾವಿರ ಮನೆಗಳನ್ನು ಹಂಚಲು ಬಾಕಿ ಇದೆ. ಜೊತೆಗೆ ಮೀನುಗಾರ ಮಹಿಳೆಯರಿಗೆ ಮೀನು ಮಾರಾಟ ಮಾಡಲು ಸರ್ಕಾರ ನೀಡುತ್ತಿದ್ದ 50,000 ರೂಪಾಯಿ ಬಡ್ಡಿರಹಿತ ಸಾಲದ ಪ್ರಮಾಣವನ್ನು ನೂತನ ಸರ್ಕಾರ ಮೂರು ಲಕ್ಷ ರೂಪಾಯಿಗೆ ಹೆಚ್ಚಿಸಿದೆ. ಆ ಮೂಲಕ ರಾಜ್ಯ ಸರ್ಕಾರ ಮೀನುಗಾರ ಮಹಿಳೆಯರ ಸಬಲೀಕರಣಕ್ಕೆ ಮುಂದಡಿ ಇಟ್ಟಿದೆ. ಇನ್ನು ಮೀನುಗಾರಿಕೆಯನ್ನು ನಂಬಿರುವ ಯುವಕರಿಗೆ ಉದ್ಯೋಗ ಹಾಗೂ ಆರ್ಥಿಕ ಭದ್ರತೆ ನೀಡಲು ಹಾಗೂ ಗ್ರಾಹಕರಿಗೆ ಕಡಿಮೆ ಬೆಲೆಗೆ ಮನೆ ಮನೆಗೆ ತಾಜಾ ಮೀನು ಒದಗಿಸಲು ಮತ್ಸ್ಯ ವಾಹಿನಿ ಯೋಜನೆಯನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರದ ಮತ್ಸ್ಯಸಂಪದ ಯೋಜನೆಯಡಿ ದೇಶದಲ್ಲೇ ಪ್ರಪ್ರಥಮ ಬಾರಿಗೆ ನಮ್ಮ ರಾಜ್ಯದಲ್ಲೇ ಈ ಯೋಜನೆ ಜಾರಿಯಾಗಿದೆ.
ರಾಜ್ಯದಲ್ಲಿ ಒಳನಾಡು ಮೀನುಗಾರಿಕೆ ಅದ್ಭುತ ಸಾಧನೆ ಮೆರೆಯುತ್ತಿದೆ. ಹತ್ತಾರು ಎಕರೆಯಲ್ಲಿ ನಡೆಯುತ್ತಿದ್ದ ಒಳನಾಡು ಕೃಷಿ ಇಂದು ಸಾವಿರಾರು ಎಕರೆಗೆ ವಿಸ್ತಾರಗೊಳ್ಳುತ್ತಿದೆ. ಆ ಮೂಲಕ ಒಳನಾಡು ಮೀನು ಕೃಷಿಯಲ್ಲಿ ಕ್ರಾಂತಿಯೇ ನಡೆಯುತ್ತಿದೆ. ಕರುನಾಡಿನ ಒಳನಾಡು ಮೀನುಗಾರಿಕೆಯು 6.53 ಲಕ್ಷ ಜನರಿಗೆ ಜೀವನೋಪಾಯ ಕಲ್ಪಿಸಿದೆ. ಪ್ರಸ್ತುತ ನಮ್ಮ ಒಳನಾಡು ಮೀನು ಉತ್ಪಾದನಾ ಸಾಮರ್ಥ್ಯವು 6.50 ಮೆಟ್ರಿಕ್‌ನಷ್ಟಿದೆ. ಇದನ್ನು ಇನ್ನಷ್ಟು ಹೆಚ್ಚಿಸಲು ರಾಜ್ಯ ಮೀನುಗಾರಿಕಾ ಇಲಾಖೆಯು ನೂತನ ತಂತ್ರಜ್ಞಾನಗಳನ್ನೊಳಗೊಂಡ ಮೀನು ಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರಗಳ ಅಭಿವೃದ್ಧಿ, ನರ್ಸರಿ, ತರಬೇತಿ ಕೇಂದ್ರಗಳ ಸ್ಥಾಪನೆಗೆ ಸಚಿವರು ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಒಳನಾಡು ಮೀನುಗಾರಿಕೆಗೆ ಪ್ರೋತ್ಸಾಹ ನೀಡಲು ಮೀನುಕೃಷಿಕರಿಗೆ ಮೀನಿನ ಕೊಳ ನಿರ್ಮಾಣಕ್ಕೆ ಸರ್ಕಾರ ಸಹಾಯಧನವನ್ನೂ ನೀಡುತ್ತಿದೆ.
ಮಂಕಾಳ ಎಸ್‌ವೈದ್ಯ ಅವರು ಬಂದರು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಂದರು ಕ್ಷೇತ್ರದಲ್ಲಿ ಪ್ರಗತಿಯ ಪರ್ವವೇ ಆರಂಭವಾಗಿದೆ. ರಾಜ್ಯದ ಕಿರು ಹಾಗೂ ಸರ್ವ ಋತು ಬಂದರುಗಳ ಅಭಿವೃದ್ಧಿಯ ಕಾರ್ಯ ಪ್ರಾರಂಭವಾಗಿದೆ. ರಾಜ್ಯದಲ್ಲಿ ಕೇಂದ್ರ ಸರ್ಕಾರ ಪುರಸ್ಕೃತ ಸಾಗರಮಾಲ ಯೋಜನೆಯ ಅನುಷ್ಠಾನಕ್ಕಿದ್ದ ತೊಡಕುಗಳನ್ನು ನಿವಾರಿಸಿ ಬಂದರುಗಳ ನಿರ್ಮಾಣ, ಉನ್ನತೀಕರಣ, ಆಧುನೀಕರಣಕ್ಕೆ ದಿಟ್ಟ ಹೆಜ್ಜೆಯನ್ನೇ ಇಟ್ಟಿದ್ದಾರೆ.ಉಡುಪಿ ವಿಭಾಗದಲ್ಲಿ ಬಂದರು ನೇತೃತ್ವದ ಕೈಗಾರಿಕೀರಣಕ್ಕೆ ವಿಪುಲ ಅವಕಾಶಗಳಿರುವುದರಿಂದ ಇಲ್ಲಿನ ಹಳೇ ಬಂದರು, ಹಂಗಾರು ಕಟ್ಟೆ ಮುಂತಾದ ಬಂದರುಗಳ ಅಭಿವೃದ್ಧಿ ಹಾಗೂ ಆಧುನೀಕರಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಈ ವಿಭಾಗದಲ್ಲಿ ಸಾಗರಮಾಲ ಯೋಜನೆಯಡಿ ಒಟ್ಟು ೨೨ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಾಗತ್ತಿದೆ. ಉಡುಪಿ ವಿಭಾಗದ ಮಂಗಳೂರು ಹಳೇ ಬಂದರಿನಲ್ಲಿ ಅತ್ಯಾಧುನಿಕ ಕೋಸ್ಟಲ್‌ಬರ್ತ್‌ನಿರ್ಮಾಣ, ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ. ಉಡುಪಿಯ ಹೆಜಮಾಡಿಯಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಕೋಸ್ಟಲ್‌ಬರ್ತ್‌ಹಾಗೂ ಮೀನುಗಾರಿಕಾ ಬಂದರು ಕೆಲವೇ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ. ಇಷ್ಟು ಮಾತ್ರವಲ್ಲ ಉಡುಪಿ ವಿಭಾಗದಲ್ಲಿ ಬಂದರು ಅಭಿವೃದ್ಧಿಗೆ ಸಂಬಂಧಿಸಿದ ಒಟ್ಟು ೨೨ ಕಾಮಗಾರಿಗಳಿಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ.
ಕಾರವಾರ ಬಂದರಿಗೆ ಕಾಯಕಲ್ಪ ನೀಡುವ ಕಾರ್ಯ ಬಂದರು ಸಚಿವರೂ ಆಗಿರುವ ಮಂಕಾಳ ಎಸ್ ವೈದ್ಯ ಅವರ ನೇತೃತ್ವದಲ್ಲಿ ಪ್ರಾರಂಭವಾಗಿದೆ. ೧೯.೧೫ಕೋಟಿ ವೆಚ್ಚದಲ್ಲಿ ಬೆಂಕಿನಂದಿಸುವ ಉಪಕರಣಗಳ ಅಳವಡಿಕೆ ಹಾಗೂ ೬.೫ ಕೋಟಿ ವೆಚ್ಚದಲ್ಲಿ ತೈಲಮಾಲಿನ್ಯ ನಿಯಂತ್ರಣ ಉಪಕರಣಗಳ ನಿರ್ವಹಣೆಯಂಥಾ ವಿಶಿಷ್ಟ ಯೋಜನೆಗಳು ಕಾರವಾರು ಬಂದರಿಗೆ ಹೊಸ ಶಕ್ತಿಯನ್ನು ತುಂಬಿದೆ. ಭಟ್ಕಳದ ತೆಂಗಿನ ಗುಂಡಿ ಬಂದರು ಅಭಿವೃದ್ಧಿ ಯೋಜನೆ ಅತ್ಯಂತ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದಿದೆ. ಇಲ್ಲಿ ನಿರ್ಮಿಸಲಾಗಿರುವ ಹೊಸ ಟ್ಟಿ, ಬ್ರೇಕ್‌ವಾಟರ್‌ಪ್ರಾಜೆಕ್ಟ್‌ಇಲ್ಲಿನ ಸ್ಥಳೀಯ ಮೀನುಗಾರರ ಬದುಕಿನ ದಿಕ್ಕನ್ನೇ ಬದಲಾಯಿಸಿದೆ. ಸಚಿವ ಮಾಂಕಾಳ ಎಸ್ ವೈದ್ಯ ಅವರ ನಿರಂತರ ಶ್ರಮ ಹಾಗೂ ದೂರದೃಷ್ಟಿತ್ವದಿಂದ ಇಂತಹ ಸ್ಥಳೀಯ ಬಂದರುಗಳಿಗೆ ಹೊಸ ಜೀವ ಬಂದಿದೆ. ಕೇಣಿ ಬಂದರಿನ ಕನಸು ನನಸಾಗುತ್ತಿದೆ. ಹೊನ್ನಾವರದಲ್ಲೂ ಹೊಸ ಬಂದರು ಸ್ಥಾಪನೆಗೆ ಯೋಜನೆ ಸಿದ್ಧವಾಗಿದೆ. ಬಂದರುಗಳ ಅಭಿವೃದ್ಧಿಯ ಜೊತೆಗೆ ಪ್ರವಾಸೋದ್ಯಮ ಹಾಗೂ ಮೀನುಗಾರ ಸಮುದಾಯದ ಏಳಿಗೆಯತ್ತಲೂ ಬಂದರು ಮತ್ತು ಒಳಜಲ ಸಾರಿಗೆ ಇಲಾಖೆ ವಿಶೇಷ ಕಾಳಜಿ ವಹಿಸಿದೆ . ಹೀಗೆ ಮಂಕಾಳ ಎಸ್ ವೈದ್ಯ ಅವರ ನೇತೃತ್ವದಲ್ಲಿ ಮೀನುಗಾರಿಕಾ ಹಾಗೂ ಬಂದರು ಕ್ಷೇತ್ರದಲ್ಲಿ ಕ್ರಾಂತಿಯ ಮಂತ್ರ ಮೊಳಗುತ್ತಿದೆ.
Mankal S Vaidya 2023 All Rights Reserved